Navigation

© Zeal News Africa

Public TV - Latest Kannada News, Public TV Kannada Live, Public TV News

Published 1 month ago1 minute read

ಹಾಸನದಲ್ಲಿ (Hassan) ಸರಣಿ ಹೃದಯಾಘಾತ ಪ್ರಕರಣಕ್ಕೆ ಸಂಬಂಧಿಸಿದ ವರದಿ ಬುಧವಾರ ರಾಜ್ಯ ಸರ್ಕಾರ ಕೈ ಸೇರಿದ್ದು, ಈ ಪೈಕಿ ಆಟೋ ಹಾಗೂ ಕ್ಯಾಬ್ ಚಾಲಕರೇ ಅಧಿಕವಾಗಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆ ಸರ್ಕಾರ ಹಾಗೂ ಆಟೋ ಅಸೋಸಿಯೇಷನ್‌ (Auto Association) ಚಾಲಕರಿಗಾಗಿ ಹೆಲ್ತ್ ಚೆಕಪ್ ನಡೆಸಲು ಮುಂದಾಗಿದೆ.

Heart Attack Auto Drivers

ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹೃದಯಾಘಾತದ ವರದಿಯನ್ನು ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಬಹಿರಂಗಪಡಿಸಿದ್ದಾರೆ. ಈ ವೇಳೆ ವಾಹನ ಚಾಲಕರ ಬಗ್ಗೆ ಆಘಾತಕಾರಿ ಅಂಶವೊಂದನ್ನು ತಿಳಿಸಿದ್ದು, ಹೃದಯಾಘಾತದಿಂದ ಮೃತಪಟ್ಟವರ ಪೈಕಿ ಶೇ.30ರಷ್ಟು ಮಂದಿ ಅಂದರೆ ಆರು ಜನ ಆಟೋ ಹಾಗೂ ಕ್ಯಾಬ್ ಚಾಲಕರು ಎಂದಿದ್ದಾರೆ. ಪ್ರಮುಖವಾಗಿ ವಾಯುಮಾಲಿನ್ಯ, ಹೊರಗಿನ ತಿಂಡಿ, ಕುಳಿತಲ್ಲೇ ಕುಳಿತಿರುವುದು ಮೊದಲಾದ ಕಾರಣಗಳಿಂದ ಹೃದಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂಬುವುದನ್ನು ತಜ್ಞರ ಬಹಿರಂಗಪಡಿಸಿದ್ದಾರೆ.

Heart Attack Auto Drivers 1

ಆರೋಗ್ಯ ಸಚಿವರ ಮಾಹಿತಿಯಿಂದ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ಬೆಚ್ಚಿಬಿದ್ದಿದ್ದಾರೆ. ಇಡೀ ರಾಜ್ಯದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಆಟೋ, ಕ್ಯಾಬ್ ಡ್ರೈವರ್‌ಗಳಿದ್ದು, ಬೆಂಗಳೂರುವೊಂದರಲ್ಲೇ ನಾಲ್ಕು ಲಕ್ಷ ಜನ ಆಟೋ, ಟ್ಯಾಕ್ಸಿ, ಕ್ಯಾಬ್ ಡ್ರೈವರ್‌ಗಳಿದ್ದಾರೆ. ಈ ಚಾಲಕರಿಗೆ ಸರ್ಕಾರ ಸಂಘ-ಸಂಸ್ಥೆಗಳ ಜೊತೆ ಮಾತನಾಡಿ ತಪಾಸಣೆ ಮಾಡುತ್ತೇವೆ ಎಂದಿದೆ. ಜೊತೆಗೆ ಆಟೋ ಅಸೋಸಿಯೇಷನ್ ಸಹ ಖಾಸಗಿ ಆಸ್ಪತ್ರೆಗಳ ಜೊತೆ ಮಾತನಾಡಿ ಪ್ರತಿ ತಿಂಗಳು ಹೆಲ್ತ್ ಕ್ಯಾಂಪ್ ಆಯೋಜಿಸಲು ಮುಂದಾಗಿದೆ. ಜೊತೆಗೆ ಹೃದಯಾಘಾತದಿಂದ ಮೃತಪಟ್ಟ ಆಟೋ ಚಾಲಕರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.

Heart Attack Auto Drivers 3

ಒಟ್ಟಿನಲ್ಲಿ ಆಟೋ, ಕ್ಯಾಬ್ ಚಾಲಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯವಾಗಲಿ. ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ನಗರಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಸರ್ಕಾರ ವಹಿಸಲಿ ಎಂದಿದೆ.

Origin:
publisher logo
Public TV - Latest Kannada News, Public TV Kannada Live, Public TV News
Loading...
Loading...
Loading...

You may also like...